ವಾತಾಪಿ ಗಣಪತಿಂ ಭಜೇಹಂ

ರಾಗಂ: ಹಂಸಧ್ವನಿ (ಸ, ರಿ2, ಗ3, ಪ, ನಿ3, ಸ)

ವಾತಾಪಿ ಗಣಪತಿಂ ಭಜೇಽಹಂ ವಾರಣಾಶ್ಯಂ ವರಪ್ರದಂ ಶ್ರೀ ।

ಭೂತಾದಿ ಸಂಸೇವಿತ ಚರಣಂ ಭೂತ ಭೌತಿಕ ಪ್ರಪಂಚ ಭರಣಮ್ । ವೀತರಾಗಿಣಂ ವಿನುತ ಯೋಗಿನಂ ವಿಶ್ವಕಾರಣಂ ವಿಘ್ನವಾರಣಮ್ ।

ಪುರಾ ಕುಂಭ ಸಂಭವ ಮುನಿವರ ಪ್ರಪೂಜಿತಂ ತ್ರಿಕೋಣ ಮಧ್ಯಗತಂ ಮುರಾರಿ ಪ್ರಮುಖಾದ್ಯುಪಾಸಿತಂ ಮೂಲಾಧಾರ ಕ್ಷೇತ್ರಸ್ಥಿತಮ್ ।

ಪರಾದಿ ಚತ್ವಾರಿ ವಾಗಾತ್ಮಕಂ ಪ್ರಣವ ಸ್ವರೂಪ ವಕ್ರತುಂಡಂ ನಿರಂತರಂ ನಿಖಿಲ ಚಂದ್ರಖಂಡಂ ನಿಜವಾಮಕರ ವಿದ್ರುತೇಕ್ಷುಖಂಡಮ್ ।

ಕರಾಂಬುಜ ಪಾಶ ಬೀಜಾಪೂರಂ ಕಲುಷವಿದೂರಂ ಭೂತಾಕಾರಂ ಹರಾದಿ ಗುರುಗುಹ ತೋಷಿತ ಬಿಂಬಂ ಹಂಸಧ್ವನಿ ಭೂಷಿತ ಹೇರಂಬಮ್ ।